Anganwadi Jobs Recruitments: ಮಹಿಳೆಯರಿಗೆ ಶುಭ ಸುದ್ದಿ! ಅಂಗನವಾಡಿಯಲ್ಲಿ ಖಾಲಿ ಇರುವಂತಹ 734 ಟೀಚರ್ ಹುದ್ದೆಗಳ ನೇಮಕಾತಿ!

Anganwadi Jobs Recruitments: ನಮಸ್ಕಾರ ಗೆಳೆಯರೇ ಈ ಒಂದು ಮಾಧ್ಯಮದ ಅಂಗನವಾಡಿ ಟೀಚರ್ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನಿದೆ ನೋಡಿ ಅದು ತುಂಬಾನೇ ಉಪಯುಕ್ತವಾದ ಮಾಹಿತಿಯಾಗಿದೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಬೇಕು. 

ನೀವು ಹೀಗೆ ಮಾಡುವುದರಿಂದ ನಿಮಗೆ ಹೆಚ್ಚಿನ ಲಾಭ ಅದು ಏನೆಂದರೆ, ಅಂಗನವಾಡಿಯಲ್ಲಿ ಖಾಲಿ ಇರುವಂತಹ 734 ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ಈ ಒಂದು ಲೇಖನದ ಮೂಲಕ ಪಡೆಯುವಿರಿ ಆದ್ದರಿಂದ ನಾವು ನಿಮ್ಮಲ್ಲಿ ಕೊನೆದಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆ ತನಕ ಸೂಕ್ಷ್ಮ ರೀತಿಯಲ್ಲಿ ಓದಿ. 

ಸ್ನೇಹಿತರೆ ಸರ್ಕಾರಿ ಕೆಲಸ ಮಾಡುವುದು ಎಷ್ಟೋ ಮಹಿಳೆಯರ ಒಂದು ಆಸೆಯಾಗಿದೆ ಆಸೆಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು ಯಾಕೆಂದರೆ 734 ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆದ್ದರಿಂದ ಯಾರೂ ಆಸಕ್ತಿಯನ್ನು ಹೊಂದಿದ್ದೀರೋ ಅವರು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಈ ಹುದ್ದೆಗಳಿಗೆ ಆಯ್ಕೆಯಾಗಿ ಸರಕಾರಿ ಉದ್ಯೋಗವನ್ನು ಮಾಡಬಹುದಾಗಿದೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ದಾಖಲೆಗಳೇನು ಕೆಳಗಿದೆ ನೋಡಿ ಮಾಹಿತಿ.

ಹುದ್ದೆಗಳ ವಿವರ 

  • ಅಂಗನವಾಡಿ ಕಾರ್ಯಕರ್ತೆಯರು-168
  • ಅಂಗನವಾಡಿ ಸಹಾಯಕಿಯರು-566 

ಹುದ್ದೆಗಳು ಖಾಲಿ ಇರುವಂತಹ ಸ್ಥಳ 

  • ಹಾಸನ 
  • ಆಲೂರು 
  • ಅರಕಲಗೂಡು 
  • ಅರಸೀಕೆರೆ 
  • ಸಕಲೇಶಪುರ 
  • ಬೇಲೂರು 
  • ಹೊಳೆನರಸೀಪುರ 

ಈ ಮೇಲಿನ ಎಲ್ಲಾ ಸ್ಥಳಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಹುದ್ದೆಗಳು ಖಾಲಿ ಇವೆ 

ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ ಏನು? 

1) ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ 12ನೇ ತರಗತಿಯನ್ನು ಕನ್ನಡ ಭಾಷೆಯಲ್ಲಿ ಪಾಸ್ ಆಗಿರಬೇಕು. 

2)ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಮಹಿಳೆಯರು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ಸರಕಾರಿ ಶಾಲೆಗಳಿಂದ 10ನೇ ತರಗತಿಯನ್ನು ಕನ್ನಡ ಭಾಷೆಯಲ್ಲಿ ಸಂಪೂರ್ಣವಾಗಿ ಪಾಸಾಗಿರಬೇಕಾಗುತ್ತದೆ. 

ಇರಬೇಕಾದ ವಯಸ್ಸಿನ ಮಿತಿ 

ಅಂಗನವಾಡಿಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಮಹಿಳೆಯರ ವಯಸ್ಸು ಕನಿಷ್ಠ19 ರಿಂದ ಗರಿಷ್ಠ 35 ವರ್ಷದ ಒಳಗಿನ ಯಾವುದೇ ಮಹಿಳೆಯರು ಈ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಆಯ್ಕೆ ಮಾಡಿಕೊಳ್ಳುವ ವಿಧಾನ 

ಅರ್ಜಿ ಸಲ್ಲಿಸುವಂತಹ ಮಹಿಳೆಯರನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು ಒಂದು ವೇಳೆ ಎಲ್ಲಾ ಮಾಹಿತಿಯಲ್ಲಿ ಮಹಿಳೆಯರು ಸಮನಾಗಿದ್ದರೆ ಯಾರು ಅಂಕ ಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ ಅವರನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಎಸ್ಸೆಸ್ಸೆಲ್ಸಿ  ಮಾರ್ಕ್ಸ್ ಕಾರ್ಡ್ 
  • 12ನೇ ತರಗತಿ ಅಂಕಪಟ್ಟಿ ಹಾಗೂ ಹತ್ತನೇ ತರಗತಿ ಅಂಕಪಟ್ಟಿ 
  • ವಾಸ ಸ್ಥಳ ಪ್ರಮಾಣ ಪತ್ರ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಪತಿಯ ಮರಣದ ಪತ್ರ (ಪತಿಯು ಮರಣ ಹೊಂದಿದ್ದಲ್ಲಿ) 
  • ಅಂಗವಿಕಲ ಪ್ರಮಾಣ ಪತ್ರ (ಅಂಗವಿಕಲಿಗೆ ಮಾತ್ರ) 

ಅರ್ಜಿ ಶುಲ್ಕ 

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ಅರ್ಜಿ ಸ್ವಲ್ಪ ಇರುವುದಿಲ್ಲ 

ಪ್ರಮುಖ ದಿನಾಂಕಗಳು 

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:04/09/2024

ಅರ್ಜಿ ಸಲ್ಲಿಸುವ ವಿಧಾನ 

ಗೆಳೆಯರೇ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದರ ಮೂಲಕ ನಿಮ್ಮ ಒಂದು ಜಿಲ್ಲೆ, ನಿಮ್ಮ ಒಂದು ಪ್ರಾಜೆಕ್ಟ್ ಮತ್ತು ಅಧಿಸೂಚನೆಯ ಸಂಖ್ಯೆ ಹಾಗೂ ಹುದ್ದೆಯನ್ನು ಆಯ್ಕೆ ಮಾಡುವುದರ ಮೂಲಕ ನೀವು ಈ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಅರ್ಜಿ ಸಲ್ಲಿಸಲು ಬೇಕಾಗುವಂತ ಲಿಂಕ್ 

ಇದನ್ನು ಓದಿ 

ಗೆಳೆಯರೇ ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿರುವಂತಹ ಮಾಹಿತಿಯು ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ನಿಮ್ಮ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಅಧಿಕ ಲೇಖನಗಳನ್ನು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಧನ್ಯವಾದ.

WhatsApp Group Join Now

Leave a Comment

error: Content is protected !!