Gruhalakshmi Scheme: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಕರ್ನಾಟಕ ಸರ್ಕಾರದ ಅತ್ಯಂತ ಟ್ರೆಂಡಿಂಗ್ ನಲ್ಲಿರುವ ಮತ್ತು ಹೆಚ್ಚು ಜನಪ್ರಿಯತೆ ಪಡೆದಿರುವ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ ಎಂದು ಹೇಳಬಹುದು. ಈ ಯೋಜನೆಯ ಮೂಲಕ ಪ್ರತಿ ಮನೆ ಯಜಮಾನಿಯ ಖಾತೆಗೆ ಜಮವಾಗುತ್ತದೆ. ಇದುವರೆಗೆ 11 ಕಂತುಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ ಎಂದು ಹೇಳಬಹುದು.
ಇನ್ನು ಕೆಲವರಿಗೆ ಈ ಯೋಜನೆಯ ಹಣ ಜಮಾ ಆಗಿಲ್ಲ ಎಂದು ಗೊಂದಲದಲ್ಲಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕಾರವರು ಜಿಎಸ್ಟಿ ಹಾಗೂ ಆದಾಯ ತೆರಿಗೆ ತುಂಬುವ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಇಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಚಿವೆ ತಿಳಿಸಿರುತ್ತಾರೆ.
ಈ ಯೋಜನೆಗೆ ಆದಾಯ ತೆರಿಗೆ ತುಂಬುವ ಹಾಗೂ ಜಿಎಸ್‌ಟಿಯನ್ನು ಕೂಡ ಭರಿಸುವ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅಂತವರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಅಂತಹ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 15 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ ಅವುಗಳನ್ನು ಅನರ್ಹರಾಗಿದ್ದಲ್ಲಿ ರಿಜೆಕ್ಟ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ಜಮವಾಗಿದ್ದು. ಕೆಲವರಿಗೆ ಜೂನ್ ತಿಂಗಳ ಹಣವೂ ಕೂಡ ಜಮಾ ಆಗಿಲ್ಲ ಎಂದು ಹೇಳಬಹುದು. ಈ ವಾರದೊಳಗೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣವು ಹಂತ ಹಂತವಾಗಿ ಮಹಿಳಾ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ ಎಂದು ಹೇಳಬಹುದು.