Navodaya Admission:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ. 6 ರಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ಪಡೆಯಲು ನವೋದಯ ಶಾಲಾ ಪ್ರವೇಶಾತಿ ಪರೀಕ್ಷೆಗಳಿಗೆ ಇದೀಗ ಅರ್ಜಿಯನ್ನು ಕರೆಯಲಾಗಿದೆ ಕಾರಣ ಆಸಕ್ತಿ ಇದ್ದವರು ಈ ಒಂದು ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಆರರಿಂದ 12ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ಪಡೆಯಬಹುದು.
ನವೋದಯ ಶಾಲಾ ಪ್ರವೇಶಾತಿಯ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲ ಒಂದು ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನೀವು ಕೂಡ ನವೋದಯ ಶಾಲಾ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಿ ಪರೀಕ್ಷೆಯನ್ನು ಬರೆಯಬಹುದಾಗಿದೆ.
ನವೋದಯ ಶಾಲೆ ಪ್ರವೇಶಾತಿ ಪರೀಕ್ಷೆ
ಕೇಂದ್ರ ಸರ್ಕಾರದ ಅದೀನದಲ್ಲಿ ಕಾರ್ಯನಿರ್ವಹಿಸಿರುತ್ತಿರುವಂತಹ ಜವಾಹರ್ ನವೋದಯ ಶಾಲೆಗಳು ನಮ್ಮ ದೇಶದಲ್ಲಿಯೇ ಉತ್ತಮ ವಸತಿ ಶಾಲೆಗಳನ್ನು ಹೊಂದಿದಂತಹ ಶಾಲೆಗಳಲ್ಲಿ ಮೊದಲನೇ ಸ್ಥಾನದಲ್ಲಿ ಬರುತ್ತದೆ. ನಿಮ್ಮ ಮಕ್ಕಳೇನಾದರೂ ಈ ಒಂದು ಪರೀಕ್ಷೆಯಲ್ಲಿ ಆಯ್ಕೆಯಾದರೆ ನಿಮ್ಮ ಮಕ್ಕಳಿಗೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಶೈಕ್ಷಣಿಕ ವರ್ಷವನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಬೋಧನೆ ಮಾಡಲಾಗುತ್ತದೆ.
ಈ ಒಂದು ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳು ಏನು ಅರ್ಹತೆಗಳೇನು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿರುತ್ತೇವೆ ಆ ಒಂದು ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಈ ಒಂದು ಪರೀಕ್ಷೆಗೆ ಅರ್ಜಿಯನ್ನ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
ಈ ಒಂದು ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಈ ಒಂದು ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಒಂದು 2013 ರಿಂದ ಜುಲೈ 1 2015ರ ಅವಧಿಯ ಒಳಗೆ ಜನಿಸಿರಬೇಕು.
ಆಯ್ಕೆ ಪ್ರಕ್ರಿಯೆ
ಈ ಶಾಲೆಗೆ ಆಯ್ಕೆ ಮಾಡಿಕೊಳ್ಳಲು ಪರೀಕ್ಷೆಯನ್ನು ನಡೆಸಲಾಗುತ್ತದೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದಂತಹ ವಿದ್ಯಾರ್ಥಿಗಳ ಮೆರಿಟ್ ಲಿಸ್ಟ್ ಅನ್ನು ಸಿದ್ಧಪಡಿಸಲಾಗುತ್ತದೆ ಮೆರಿಟ್ ನಲ್ಲಿ ಇರುವಂತಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗೆ ಕರೆಯಲಾಗುವುದು ದಾಖಲಾತಿ ಪರಿಶೀಲನೆ ಆದ ನಂತರ ಅರ್ತೇ ಹೊಂದಿರುವಂತಹ ವಿದ್ಯಾರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ನಾವು ಕೆಳಗೆ ಒಂದು ಲಿಂಕನ್ನ ಈ ಒಂದು ಪರೀಕ್ಷೆಗೆ ಅರ್ಜಿ ಸಲ್ಲಿಸಲು ನೀಡಿರುತ್ತೇವೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಕೊಂಡು ನೀವು ಈ ಒಂದು ಪರೀಕ್ಷೆಗೆ ಸುಲಭವಾಗಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 07,2024