Network Issue:ನಿಮ್ಮ ಫೋನ್ ಗೆ ನೆಟ್ವರ್ಕ್ ಸರಿಯಾಗಿ ಬರಲ್ವಾ? ಕಾಲ್ ಮಾಡಿದ್ರೆ ಕೇಳಿಸಲ್ವಾ? ಇಲ್ಲಿದೆ ನೋಡಿ ಪರಿಹಾರ!

Network Issue:ನಮಸ್ಕಾರ ಗೆಳೆಯರೇ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ. ಇವತ್ತಿನ ಈ ಒಂದು ಲೇಖನದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಹೊರಬರಲು ನೀವು ಮಾಡಬೇಕಾದ ಕೆಲಸಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನ ಮೂಲಕ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. 

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಬೇಕೆಂದು ವಿನಂತಿಸಿಕೊಳ್ಳುತ್ತೇವೆ ನಾವು ಈ ಒಂದು ಲೇಖನದಲ್ಲಿ ನಿಮಗೆ ನೆಟ್ವರ್ಕ್ ಸಮಸ್ಯೆ ಆಗುತ್ತಿದ್ದರೆ ಅದರಿಂದ ಪರಿಹಾರ ಕೊಂಡುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ.

ನಿಮ್ಮ ಫೋನ್ ಗೆ ನೆಟ್ವರ್ಕ್ ಸರಿಯಾಗಿ ಬರಲ್ವಾ?

ಸ್ನೇಹಿತರೆ ಇದೀಗಿನ ಕಾಲದಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇದ್ದು ಹಿರಿಯರಿಂದ ಕಿರಿಯರ ತನಕ ಕಿರಿಯರಿಂದ ಹಿರಿಯರ ತನಕ ಈ ಸ್ಮಾರ್ಟ್ ಫೋನ್ ಬಳಕೆಯಲ್ಲಿದೆ ಎಂದು ಹೇಳಿದರೆ ತಪ್ಪಾಗಲಾರದು. ಒಂದು ಕುಟುಂಬದಲ್ಲಿ ಏನಿಲ್ಲ ಎಂದರು ನಾಲ್ಕು ಇಲ್ಲವೇ ಐದು ಫೋನ್ ಗಳು ಇದ್ದೇ ಇರುತ್ತವೆ. 

ಹೀಗೆ ಫೋನ್ ಬಳಸುವಂತಹ ಎಲ್ಲರಿಗೂ ಆಗುವಂತಹ ಒಂದು ಸಮಸ್ಯೆ ಎಂದರೆ ಅದು ನೆಟ್ವರ್ಕ್ ಸಮಸ್ಯೆ ಕೆಲವೊಂದು ಸಲ ಮೊಬೈಲಿಗೆ ನೆಟ್ವರ್ಕ್ ಸರಿಯಾಗಿ ಬರುವುದಿಲ್ಲ ಕಾಲ್ ಮಾಡಿದರೆ ಮಾತನಾಡುವುದು ಕೇಳುವುದಿಲ್ಲ ಒಮ್ಮೊಮ್ಮೆ ಫೋನ್ ಆನ್ ನಲ್ಲಿ ಇದ್ದರೂ ಕೂಡ ಕಾಲ್ ಮಾಡಿದವರಿಗೆ ಸ್ವಿಚ್ ಆಫ್ ಎಂದು ಹೇಳುತ್ತದೆ. 

ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ಮೊಬೈಲ್ ಗೆ ಸರಿಯಾಗಿ ಸಿಗ್ನಲ್ ಬಾರದೆ ಇರುವುದು ಒಂದು ವೇಳೆ ನೆಟ್ವರ್ಕ್ ಏನಾದರೂ ಸರಿಯಾಗಿ ಬಾರದೆ ಹೋದರೆ ಮಾತನಾಡುವುದು ನಮಗೆ ಸರಿಯಾಗಿ ಕೇಳುವುದಿಲ್ಲ ಈ ಸಮಸ್ಯೆಯು ಹಳ್ಳಿಗಳಲ್ಲಿ ಕಾಣುತ್ತದೆ. ಇದೀಗ ಈ ಸಮಸ್ಯೆಯನ್ನ ಹಲವಾರು ಜನರು ಅನುಭವಿಸುತ್ತಿದ್ದಾರೆ ಇದರಿಂದ ನಮ್ಮ ಸಮಯ ಕೂಡ ವ್ಯರ್ಥವಾಗುತ್ತದೆ ಜೊತೆಗೆ ಆಗಲೇ ಮಾಡಬೇಕಾದಂತಹ ಅಗತ್ಯ ಕೆಲಸಗಳು ಕೂಡ ನಿಲ್ಲುತ್ತವೆ. 

ಈ ಫೋನ್ ನೆಟ್ವರ್ಕ್ ಅನ್ನ ಹೇಗೆ ಸರಿಪಡಿಸುವುದು ಎಂಬುದರ ಬಗ್ಗೆ ಸಂಪೂರ್ಣವಾದಂತ ಹಾಗೂ ಸ ವಿಸ್ತಾರವಾದಂತಹ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ ಬನ್ನಿ.

ನೆಟ್ವರ್ಕ್ ಸಮಸ್ಯೆಯಿಂದ ಪರಿಹಾರ 

ಸ್ನೇಹಿತರೆ ಈಗಿನ ಕಾಲದಲ್ಲಿ ಜನರು ಸ್ಮಾರ್ಟ್ಫೋನ್ ಅನ್ನ ಕಚೇರಿ ಕೆಲಸದಿಂದ ಹಿಡಿದು ತಮ್ಮ ವೈಯಕ್ತಿಕ ಕೆಲಸಗಳ ವರೆಗೆ ಬಳಸುತ್ತಾರೆ ಆದರೆ ಎಲ್ಲರಿಗೂ ಎಲ್ಲ ಸಮಯದಲ್ಲಿ ನೆಟ್ವರ್ಕ್ ಸರಿಯಾಗಿ ಬರುವುದಿಲ್ಲ ಇದಕ್ಕೆ ಮುಖ್ಯ ಕಾರಣ ಏನೆಂದರೆ, ಮೊಬೈಲಿನ ಅಥವಾ ಸ್ಮಾರ್ಟ್ ಫೋನಿನ ನೆಟ್ವರ್ಕ್ ಆಂಟಿನಾ ಹಾಳಾಗಿರಬಹುದು ತಕ್ಷಣವೇ ನೀವು ನಿಮ್ಮ ಹತ್ತಿರದ ಮೊಬೈಲ್ ರಿಪೇರಿ ಅಂಗಡಿಗೆ ಭೇಟಿ ನೀಡಿ ನಿಮ್ಮ ಮೊಬೈಲಿನ ನೆಟ್ವರ್ಕ್ ಆಂಟೇನ ಸರಿಪಡಿಸಿಕೊಳ್ಳಿ. 

ಇದರ ಜೊತೆಗೆ ನಿಮ್ಮ ಮೊಬೈಲ್ ನಲ್ಲಿ ಅಂದರೆ ಮೊಬೈಲಿನ ಸಾಫ್ಟ್ವೇರ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ನೆಟ್ವರ್ಕ್ ಸಮಸ್ಯೆಗಳು ಉಂಟಾಗುತ್ತವೆ ನಿಮ್ಮ ಮೊಬೈಲ್ನ ಸಾಫ್ಟ್ವೇರ್ ಅಪ್ಡೇಟ್ ಅನ್ನ ಕೇಳಿದಾಗಲೇ ಮಾಡಬೇಕು ಒಂದು ವೇಳೆ ನೀವು ಕೇಳಿದಾಗ ಮಾಡದೆ ಅಷ್ಟೇ ಬಿಟ್ಟರೆ ನೆಟ್ವರ್ಕ್ ಸಮಸ್ಯೆಗಳು ಆಗುತ್ತವೆ. 

ಇನ್ನು ಕೆಲವು ಸಮಯಗಳಲ್ಲಿ ನೀವು ಮನೆಯಲ್ಲಿದ್ದಾಗ ನಿಮ್ಮ ಮನೆಯ ಗೋಡೆಗಳು ಲೋಹದ ವಸ್ತುಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳು ನೆಟ್ವರ್ಕ್ ಸಿಗ್ನಲ್ ಗಳಿಗೆ ಅಡ್ಡವಾಗಿ ಇರುವ ಕಾರಣ ನಿಮಗೆ ನೆಟ್ವರ್ಕ್ ಸರಿಯಾಗಿ ಸಿಗುತ್ತಾ ಇರುವುದಿಲ್ಲ. ಹಾಗೂ ನಿಮ್ಮ ಸಿಮ್ ಕಾರ್ಡಿನಲ್ಲಿ ಕೂಡ ಸಮಸ್ಯೆ ಇದ್ದರೂ ನೆಟ್ವರ್ಕ್ ನಿಮಗೆ ಸರಿಯಾಗಿ ಬರುವುದಿಲ್ಲ.

ಎಲ್ಲ ಸರಿಯಾಗಿ ಇದ್ದು ಆದರೂ ನಿಮ್ಮ ಮೊಬೈಲ್ಗೆ ನೆಟ್ವರ್ಕ್ ಸರಿಯಾಗಿ ಬರುತ್ತಿಲ್ಲವೆಂದರೆ ನೀವು ನಿಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಸ್ವಿಚ್ ಆನ್ ಮಾಡಿ ನಂತರ ನಿಮ್ಮ ಮೊಬೈಲ್ ಗೆ ಸರಿಯಾಗಿ ನೆಟ್ವರ್ಕ್ ಬರುತ್ತದೆ.

WhatsApp Group Join Now

Leave a Comment