PM USP Scholarship:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ನಿಮಗೆ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಪ್ರೋತ್ಸಾಹ ಧನದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ. ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳುವುದರ ಮೂಲಕ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ.
ಪ್ರೀತಿಯ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿದೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಒಂದು ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.
PM USP Scholarship
ಪ್ರಿಯ ವಿದ್ಯಾರ್ಥಿಗಳೇ ಈ ಒಂದು ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರವು ಕಾಲೇಜು ಹಾಗು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಲಾಗಿದೆ ಈ ಒಂದು ವಿದ್ಯಾರ್ಥಿ ವೇತನವನ್ನು ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಬಡ ಕುಟುಂಬದಲ್ಲಿ ಇರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ಈ ಒಂದು ಯೋಜನೆಯನ್ನ ಪ್ರಾಥಮಿಕ ಉದ್ದೇಶವಾಗಿದೆ.
ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ನೀವು ಕೂಡ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರ ಇರಬೇಕಾದ ಅರ್ಹತೆಗಳೇನು? ಕೆಳಗೆ ಸಂಪೂರ್ಣವಾಗಿ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಅದನ್ನು ಓದಿ ತಿಳಿದುಕೊಳ್ಳಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯು 12ನೇ ತರಗತಿಯಲ್ಲಿ ಇಲ್ಲವೇ ತತ್ಸಮಾನ ಪರೀಕ್ಷೆಯಲ್ಲಿ ಸಂಬಂಧಿಸಿದಂತಹ ಸ್ಟ್ರೀಮ್ ನಲ್ಲಿ ಯಶಸ್ವಿಯಾಗಿ 80ರಷ್ಟು ಅಂಕಗಳನ್ನು ಪಡೆದ ಪಾಸ್ ಆಗಿರಬೇಕು
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯು ನಿಯಮಿತ ಪದವಿ ಕೋರ್ಸ್ ಗಳನ್ನು ಅನುಸರಿಸುತ್ತಿರಬೇಕು
- ವಿದ್ಯಾರ್ಥಿಯು ಭಾರತದಲ್ಲಿ ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ಕಾಲೇಜು ಇಲ್ಲವೇ ಸಂಸ್ಥೆಗಳಲ್ಲಿ ಕೋರ್ಸುಗಳನ್ನು ಅನುಸರಿಸುತ್ತಿರಬೇಕು
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಯ ಕುಟುಂಬದ ಕೌಟುಂಬಿಕ ವಾರ್ಷಿಕ ಆದಾಯವು ₹4,50,000/- ಮೀರಿರಬಾರದು
- ವಿದ್ಯಾರ್ಥಿಯು ವಿಶೇಷವಾಗಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು
ವಿದ್ಯಾರ್ಥಿ ವೇತನದ ಮೊತ್ತ
- ವಾರ್ಷಿಕವಾಗಿ 12,000 ದಿಂದ 20,000 ವರೆಗೆ
ಬೇಕಾಗುವ ದಾಖಲೆಗಳು
- ವಿದ್ಯಾರ್ಥಿ ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಪೋಷಕರ ಆಧಾರ್ ಕಾರ್ಡ್
- ಪೋಷಕರ ಆದಾಯ ಪ್ರಮಾಣ ಪತ್ರ
- ಇಮೇಲ್ ಐಡಿ
- ಜಾತಿ ಪ್ರಮಾಣ ಪತ್ರ
- ಅಂಗವಿಕಲ್ಲೇ ಪ್ರಮಾಣ ಪತ್ರ, ಅನ್ವಯಿಸಿದರೆ ಮಾತ್ರ
ಅರ್ಜಿ ಸಲ್ಲಿಸುವ ವಿಧಾನ
ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು ನೋಂದಾಯಿಸಿಕೊಳ್ಳಲು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಿ ನಂತರ ಅಪ್ಲಿಕೇಶನ್ ಹಾಕಲು ಅರ್ಜಿ ಲಿಂಕ್ ಎಂದು ಕೆಳಗೆ ಇನ್ನೊಂದು ಲಿಂಕನ್ನ ನೀಡಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ಸಲ್ಲಿಸಿ.