Prize Money Scholarship: ನಮಸ್ಕಾರ ವಿದ್ಯಾರ್ಥಿಗಳೇ ನನ್ನ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ ಎಂದರೆ ಪ್ರೈಸ್ ಮನಿ ಸ್ಕಾಲರ್ಶಿಪ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುವ ಒಂದು ಈ ಪ್ರಯತ್ನವನ್ನು ಮಾಡುತ್ತಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ನೀವು ಕೂಡ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ.
10ನೇ ತರಗತಿ ಪ್ರೈಸ್ ಮನಿ ವಿದ್ಯಾರ್ಥಿ ವೇತನ
2023 ಹಾಗೂ 24ನೇ ಸಾಲಿನಲ್ಲಿ ಪಾಸ್ ಆಗಿರುವಂತಹ 10ನೇ ತರಗತಿಯ ವಿದ್ಯಾರ್ಥಿಗಳು ಅಂದರೆ ಯಾರು 60ರಷ್ಟು ಮೇಲ್ಪಟ್ಟು ಅಂಕಗಳನ್ನು ತೆಗೆದು ಪಾಸ್ ಆಗಿರುವಂತಹ ವಿದ್ಯಾರ್ಥಿಗಳು ಇರುತ್ತಾರೆ ಅವರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಈ ಒಂದು ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಕರೆಯಲಾಗಿದೆ.
10ನೇ ತರಗತಿಯ ಪರೀಕ್ಷೆಯಲ್ಲಿ ಶೇಕಡ 60ರಕ್ಕಿಂತ ಹೆಚ್ಚು ಅಂದರೆ ಶೇಕಡ 75 ರಷ್ಟು ಅಂಕಗಳನ್ನು ಪಡೆದಿರುವಂತಹ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ. 60ರಷ್ಟು ಮೇಲ್ಪಟ್ಟ ಅಂಕ ತೆಗೆದಂತಹ ವಿದ್ಯಾರ್ಥಿಗಳಿಗೆ ರೂ.7000ಗಳ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಹಾಗೂ 75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಂತಹ ವಿದ್ಯಾರ್ಥಿಗಳಿಗೆ 15,000 ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿ ವೇತನ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಪಾಸ್ ಆಗಿರುವಂತಹ ದ್ವಿತೀಯ ಪಿಯುಸಿ ಹಾಗೂ ಅಂತಿಮ ಪದವಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಅಂದರೆ ಶೇಕಡವಾರು 60ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರುವಂತಹ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಆನ್ಲೈನ್ ಮುಖಾಂತರ ಈ ಒಂದು ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನು ಕರೆಯಲಾಗಿದೆ. ಈ ವಿದ್ಯಾರ್ಥಿ ವೇತನವನ್ನು 60ರಷ್ಟು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿಗಳ ವರೆಗೆ ಒಂದು ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಇಮೇಲ್ ಐಡಿ
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆಯ ವಿವರ
- ಕಾಲೇಜಿಗೆ ಪ್ರವೇಶವಾಗಿರುವ ರಶೀದಿ
- ಜಾತಿ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ
ವಿದ್ಯಾರ್ಥಿಗಳೇ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ಒಂದು ಡೈರೆಕ್ಟ್ ಲಿಂಕನ್ನು ನಾವು ಈಗಾಗಲೇ ಕೆಳಗೆ ನೀಡಿರುತ್ತೇವೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಪ್ರೈಸ್ ಮಣಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ ಧನ್ಯವಾದ.