Adhar Update: ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ತಿದ್ದುಪಡಿ ಮಾಡಬಹುದು! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

Adhar Update: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಸೆಪ್ಟೆಂಬರ್ 14ರ ವರೆಗೆ ಆಧಾರ್ ಕಾರ್ಡನ್ನು ನವೀಕರಣಗೊಳಿಸಲು ಗಡವನ್ನು ವಿಸ್ತರಿಸಲಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಹತ್ತು ವರ್ಷದ ಒಳಗಿನ ಆಧಾರ್ ಕಾರ್ಡ್ ಗಳನ್ನು ಮನೆಯಲ್ಲಿ ಕುಳಿತು ನೀವು ಸುಲಭವಾಗಿ ನವೀಕರಿಸಬಹುದಾಗಿರುತ್ತದೆ. ಆದ್ದರಿಂದ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ಆಧಾರ್ ಕಾರ್ಡ್ ಎಷ್ಟು ಮುಖ್ಯ ವಸ್ತು ಎಂದು ನಿಮಗೆ ಗೊತ್ತೇ ಇದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್ ಕಾರ್ಡ್ ಕಡ್ಡಾಯ ದಾಖಲೆಯಾಗಿರುತ್ತದೆ. ಹಾಗಾಗಿ ಆಧಾರ್ ಕಾರ್ಡ್ ಅನ್ನು ನೀವು ಇದೀಗ ಮನೆಯಲ್ಲಿ ಕುಳಿತು ನವೀಕರಣವನ್ನ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಆಧಾರ್ ಕಾರ್ಡ್ (Adhar Update) ನವೀಕರಣ:

ಹೌದು ಸ್ನೇಹಿತರೆ, ಆಧಾರ್ ಕಾರ್ಡ್ ನವೀಕರಣಗೊಳಿಸಲು ಇದೀಗ ನೀವು ಸೆಪ್ಟಂಬರ್ 14ರವರೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿರುತ್ತದೆ. ಆದ್ದರಿಂದ 10 ವರ್ಷದ ಹಳೆಯ ಆಗಿರುವ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡದಿದ್ದರೆ, 14ನೇ ಸೆಪ್ಟೆಂಬರ್ 2024ರ ಒಳಗಾಗಿ ನೀವು ನವೀಕರಿಸಿ. ಹಾಗೂ ಆಧಾರ್ ಕಾರ್ಡ್ ನವೀಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

ಆಧಾರ್ ಕಾರ್ಡ್ ವಿಳಾಸವನ್ನು ನವೀಕರಿಸುವುದು ಹೇಗೆ: 

ಸ್ನೇಹಿತರೆ, ಮೊದಲು ನೀವು ಆಧಾರ್ ಕಾರ್ಡ್ ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ನಿಮ್ಮ ಆಧಾರ್ ನಂಬರ್ ಹಾಕಿ ಕ್ಯಾಪ್ಚಾ ಕೊಡನ್ನು ನಮೂದಿಸಿ. ಮೊದಲು ಲಾಗಿನ್ ಮಾಡಿಕೊಳ್ಳಿ. ನಂತರ ನೀವು ವಿಳಾಸವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಹೊಸ ವಿಳಾಸವನ್ನು ಸರಿಯಾದ ವಿವರಗಳೊಂದಿಗೆ ನಮೂದಿಸಿ. 

ವಿಳಾಸವನ್ನು ಸಾಬೀತುಪಡಿಸುವ ದಾಖಲೆಗಳನ್ನು ನೀವು ಅಪ್ಲೋಡ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಮೊಬೈಲ್ ನಂಬರಿಗೆ ಬರುವ ಓಟಿಪಿಯನ್ನು ಕೂಡ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿರಿ. ನಂತರ ನೀವು ಶುಲ್ಕವನ್ನು ತುಂಬ ಬೇಕಾಗುತ್ತದೆ ರೂ. 50 ಶುಲ್ಕವನ್ನು ಪಾವತಿಸಬೇಕು. ಈ ರೀತಿಯಾಗಿ ನೀವು ಆಧಾರ್ ಕಾರ್ಡ್ ನವೀಕರಣವನ್ನು ಮಾಡಿಕೊಳ್ಳಬಹುದಾಗಿರುತ್ತದೆ.

ನೀವು ನಿಮ್ಮ ಮೊಬೈಲ್ ನಲ್ಲಿ ಆಧಾರ್ ನವೀಕರಣ ಮಾಡಿಕೊಳ್ಳಲು ಸ್ವಲ್ಪ ಗೊಂದಲವಿದ್ದಲ್ಲಿ, ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನೀವು ಬೇಕಾದ ದಾಖಲೆಗಳನ್ನು ಒದಗಿಸುವ ಮೂಲಕ ಸುಲಭವಾಗಿ ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಳ್ಳಬಹುದಾಗಿರುತ್ತದೆ.

WhatsApp Group Join Now

Leave a Comment