LG Scholarship:ವಿದ್ಯಾರ್ಥಿಗಳಿಗೆ ₹2,00,000 ವಿದ್ಯಾರ್ಥಿ ವೇತನ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

LG Scholarship:ನಮಸ್ಕಾರ ನನ್ನ ಎಲ್ಲ ಪ್ರೀತಿಯ ನಾಡಿನ ಸಮಸ್ತ ವಿದ್ಯಾರ್ಥಿಗಳಿಗೆ, ಪ್ರಿಯ ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ಲೈಫ್ಸ್ ಗುಡ್ ವಿದ್ಯಾರ್ಥಿ ವೇತನದಿಂದ ಸಿಗುವಂತಹ ಎರಡು ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್ ನ ಬಗ್ಗೆ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸುವ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ ಕಾರಣ ನಮ್ಮ ಈ ಒಂದು ಪ್ರಯತ್ನವನ್ನು ಮೆಚ್ಚಿಸಲು ಈ ಒಂದು ಲೇಖನವನ್ನು ಕೊನೆತನಕ ಓದಬೇಕಾಗಿ ವಿನಂತಿ.

ಪ್ರಿಯ ವಿದ್ಯಾರ್ಥಿಗಳೇ ಈ ಒಂದು ವಿದ್ಯಾರ್ಥಿ ವೇತನದಿಂದ ನೀವು ಎರಡು ಲಕ್ಷ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇರಬೇಕಾದ ರಜೆಗಳನ್ನು ಬೇಕಾಗುವ ದಾಖಲೆಗಳೇನು ಹಾಗೂ ಅರ್ಜಿ ಸಲ್ಲಿಸಲು ಮನೆ ದಿನಾಂಕ ಯಾವುದು ಎಂಬುದರ ಬಗ್ಗೆ ಕುರಿತಾದಂತಹ ಸಂಪೂರ್ಣ ವಿವರವನ್ನು ನೀವು ಈ ಒಂದು ಲೇಖನದಲ್ಲಿ ನೋಡಬಹುದಾಗಿದೆ. 

LG Scholarship

ಹೌದು ವಿದ್ಯಾರ್ಥಿಗಳೇ ಭಾರತದಲ್ಲಿ ಒಂದು ಪ್ರತಿಷ್ಠಿತ ಕಂಪನಿ ಆದಂತಹ ಎಲ್ ಜಿ ಅಂದರೆ ಲೈಫ್ ಗುಡ್ ಕಂಪನಿಯ ವತಿಯಿಂದ ಆರ್ಥಿಕವಾಗಿ ದುರ್ಬಲಗೊಂಡು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಸಲುವಾಗಿ ಎಲ್ ಜಿ ಎಲೆಕ್ಟ್ರಾನಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಿಎಸ್ಆರ್ ಉಪಕ್ರಮವಾಗಿದ್ದು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. 

ಒಂದು ಕಾರ್ಯಕ್ರಮದ ಮುಖ್ಯ ಗುರಿ ಎಂದರೆ ಭಾರತದಲ್ಲಿರುವಂತಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 2 ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೀಡುವುದಾಗಿದೆ. ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಹಾಗೂ ಬೇಕಾಗುವ ದಾಖಲೆಗಳೇನು ಕೆಳಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

ಈ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆ 

  • ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿಯು ಭಾರತದಲ್ಲಿ ಮಾನ್ಯತೆ ಪಡೆದಿರುವಂತಹ ಹಾಗೂ ಆಯ್ದ ಕಾಲೇಜುಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸುಗಳನ್ನು ಯಾವುದೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
  • ಈ ಒಂದು ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಯು 12ನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ 60ರಷ್ಟು ಅಂಕಗಳನ್ನು ಗಳಿಸಿ ಪಾಸ್ ಆಗಿರಬೇಕು. 
  • ಒಂದು ವೇಳೆ ಪದವಿಯಲ್ಲಿ ಎರಡನೇ ಮೂರನೇ ಹಾಗೂ ನಾಲ್ಕನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಯು ಹಿಂದಿನ ತನ್ನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60ರ ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
  • Buddy4study ಮತ್ತು ಎಲ್ ಜಿ ಎಲೆಕ್ಟ್ರಾನಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಉದ್ಯೋಗಿಗಳ ಮಕ್ಕಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಹೊಂದಿಲ್ಲ 

ಕೆಳಗಿನ ಹೇಳಿರುವಂತಹ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ 

  1. ಅಂಬುಜಾ ನಿಯೋಟೀಯ ವಿಶ್ವವಿದ್ಯಾಲಯ 
  2. ಗೋಲ್ ಇನ್ಸ್ಟಿಟ್ಯೂಟ್ 
  3. ಭಾರತೀಯ ಕೃಷಿ ಕಾಲೇಜು 
  4. ಬಿರಿಯಾನಿ ಗ್ರೂಪ್ ಆಫ್ ಕಾಲೇಜ್, ಜೈಪುರ್ ರಾಜಸ್ಥಾನ 
  5. ಲಾರ್ಡ್ಸ್ ಯುನಿವರ್ಸಿಟಿ ಅಲ್ವಾರ್ ರಾಜಸ್ಥಾನ್ 
  6. ಓಲ್ಡ್ ಕಾಲೇಜ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಫಾರೂಕ್ ನಗರ ಹರಿಯಾಣ 
  7. ಎಷ್ ಆಂಟಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಫಾರೂಕ್ ನಗರ ಹರಿಯಾಣ 
  8. ಕಲ್ಕದಂತ್ ಕಾಲೇಜ್ ಮೀರತ್ ಉತ್ತರ ಪ್ರದೇಶ್ 
  9. ಸಾಯಿನಾಥ ವಿಶ್ವವಿದ್ಯಾಲಯ ರಾಂಚಿ ಜಾರ್ಖಂಡ್ 
  10. ಜಿವಿಎಂ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸೋನಿಪತ್ ಹರಿಯಾಣ 
  11. ಡಾ ವಿಖೆ ಪಾಟೀಲ್ ಫೌಂಡೇಶನ್ ಕಾಲೇಜ್ ಅಹಮದ್ ನಗರ ಮಹಾರಾಷ್ಟ್ರ
  12. ನೇತಾಜಿ ಸುಭಾಷ್ ವಿಶ್ವವಿದ್ಯಾನಿಲಯ ಜಮ್ ಶೇಡ್ಪುರ್, ಜಾರ್ಖಂಡ್ 
  13. ಬಿಟ್ಸಂ ಮುಂಬೈ ಮಹಾರಾಷ್ಟ್ರ 
  14. ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಿಲಯ ವಿಜಯಪುರ ಕರ್ನಾಟಕ 

ಈ ಮೇಲಿನ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. 

ಈ ವಿದ್ಯಾರ್ಥಿ ವೇತನದ ಪ್ರಯೋಜನಗಳು 

  • ಯುಜಿ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದ 50ರಷ್ಟು ಇಲ್ಲವೇ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನ 
  • ಪಿಜಿ ವಿದ್ಯಾರ್ಥಿಗಳಿಗೆ ಬೋಧನ ಶುಲ್ಕದ 50ರಷ್ಟು ಇಲ್ಲವೇ ಎರಡು ಲಕ್ಷದವರೆಗೆ ವಿದ್ಯಾರ್ಥಿ ವೇತನ 

ಶೂನ್ಯ ಬೋಧನಾ ಶುಲ್ಕ ಮತ್ತು 8 ಲಕ್ಷಕ್ಕಿಂತ ಕಡಿಮೆ ಕುಟುಂಬದ ಆದಾಯ ಹೊಂದಿರುವ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಕೆಳಗಿನ ಸೌಲಭ್ಯಗಳು 

  • ಯುಜಿ ವಿದ್ಯಾರ್ಥಿಗಳಿಗೆ 50,000 
  • ಪಿಜಿ ವಿದ್ಯಾರ್ಥಿಗಳಿಗೆ ಒಂದು ಲಕ್ಷ

ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು 

  • ವಿದ್ಯಾರ್ಥಿಯ 12ನೇ ತರಗತಿಯ ಅಂಕಪಟ್ಟಿ ಹಾಗೂ ಪದವಿ ಸೆಮಿಸ್ಟರ್ನ ಅಂಕಪಟ್ಟಿಗಳು 
  • ಆಧಾರ್ ಕಾರ್ಡ್ 
  • ಆದಾಯ ಪ್ರಮಾಣ ಪತ್ರ 
  • ಇನ್ಕಮ್ ಟ್ಯಾಕ್ಸ್ ರಿಟರ್ನ್ ಸ್ಟೇಟ್ಮೆಂಟ್ 
  • ಸ್ಯಾಲರಿ ಸ್ಲಿಪ್ 
  • ಫಾರಂ 16 
  • ಬಿಪಿಎಲ್ ಪಡಿತರ ಚೀಟಿ 
  • ವಾಸ ಸ್ಥಳ ಪ್ರಮಾಣ ಪತ್ರ 
  • ಕಾಲೇಜಿಗೆ ಪ್ರವೇಶವಾಗಿರುವ ರಶೀದಿ 
  • ಬ್ಯಾಂಕ್ ಖಾತೆಯ ವಿವರ 
  • ವಿದ್ಯಾರ್ಥಿಯ ಫೋಟೋಗಳು

ಅರ್ಜಿ ಸಲ್ಲಿಸುವ ವಿಧಾನ 

  • ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಅರ್ಜಿ ಸಲ್ಲಿಸಿ ಅರ್ಜಿ ಲಿಂಕ್, ಈ ಲಿಂಕ್ ಮೇಲೆ ಕ್ಲಿಕ್ ಮಾಡಿ 
  • ನಂತರ buddy4studyಯ ಮುಖಪುಟ ತೆರೆಯುತ್ತದೆ ಈ ಒಂದು ಮುಖಪುಟದಲ್ಲಿ ನೀವು ರೆಜಿಸ್ಟರ್ ಆಗುವುದರ ಮೂಲಕ ನಿಮ್ಮ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆದುಕೊಳ್ಳಿ 
  • ನಂತರ ರಿಜಿಸ್ಟರ್ ಆದ ಮೇಲೆ ಅಪ್ಲಿಕೇಶನ್ ಫಾರ್ಮ್ ಪೇಜ್ ಓಪನ್ ಆಗುತ್ತದೆ 
  • ಅಲ್ಲಿ ಕೇಳಿರುವಂತ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ 
  • ನಂತರ ಅಗತ್ಯವಿರುವ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡುವುದರ ಮೂಲಕ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
WhatsApp Group Join Now

Leave a Comment

error: Content is protected !!