New Ration Card Application Check:ನಮಸ್ಕಾರ ನನ್ನ ನಾಡಿನ ಎಲ್ಲ ಜನತೆಗೆ. ನನ್ನ ಪ್ರೀತಿಯ ಓದುಗರೆ ನಾವು ಇವತ್ತು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಎಂದರೆ ನೀವು ಒಂದು ವೇಳೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದ್ದರೆ ನಿಮ್ಮ ಪಡಿತರ ಚೀಟಿ ನಮೂದಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ನಿಮಗೆ ದೊರಕುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.
ನಿಮಗೆ ಈ ಒಂದು ಲೇಖನದಲ್ಲಿ ನೀವು ಒಂದು ವೇಳೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದ್ದರೆ ಅದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿ ಇರುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರಿಂದ ಆ ಎಲ್ಲ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಹೊಸ ಪಡಿತರ ಚೀಟಿ
ನಮ್ಮ ಒಂದು ರಾಜ್ಯದಲ್ಲಿ ಸುಮಾರು 9,000 ಹೊಸ ಪಡಿತರ ಚೀಟಿಗೆ ಅರ್ಜಿಗಳು ಹಾಕಲಾಗಿದ್ದು ಅವರೆಲ್ಲರೂ ಹೊಸ ಪಡಿತರ ಚೀಟಿಯನ್ನು ಇನ್ನುವರಿಗೆ ಪಡೆದಿಲ್ಲ ಅವರ ಪಡಿತರ ಚೀಟಿಯ ಅರ್ಜಿ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಅವರಿಗೆ ಮಾಹಿತಿ ಕೂಡ ಇರುವುದಿಲ್ಲ ಒಂದು ವೇಳೆ ನೀವು ಕೂಡ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಪಡಿತರ ಚೀಟಿಯ ಸ್ಥಿತಿ ಏನಾಗಿದೆ ಎಂಬುವುದರ ಬಗ್ಗೆ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀವು ತಿಳಿಯಿರಿ.
ಹೊಸ ಪಡಿತರ ಚೀಟಿಗೆ ಹಾಕಲಾದ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ?
ನನ್ನ ಪ್ರೀತಿಯ ಓದುಗರೆ, ನೀವು ಒಂದು ವೇಳೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದ್ದರೆ ನಾವು ಕೆಳಗೆ ನೀಡಿರುವಂತಹ ವಿಧಾನಗಳನ್ನು ಅನುಸರಿಸುವುದರ ಮೂಲಕ ನೀವು ನಿಮ್ಮ ಒಂದು ಹೊಸ ಪಡಿತರ ಚೀಟಿಯ ಸ್ಥಿತಿಯನ್ನು ನೋಡಿಕೊಳ್ಳಬಹುದಾಗಿದೆ.
- ಮೊದಲಿಗೆ https://ahara.kar.nic.in/Home/EServices ಈ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವಿರಿ
- ನಂತರ ನೀವು ಅಲ್ಲಿ ಭಾಷೆಯ ಸೆಲೆಕ್ಟ್ ಅನ್ನು ಮಾಡಿಕೊಳ್ಳಬಹುದು ನೀವು ಓಪನ್ ಮಾಡಿದ ನಂತರ ಅಲ್ಲಿ ಭಾಷೆಯು ಇಂಗ್ಲೀಷ್ ಆಗಿರುತ್ತದೆ
- ಒಂದು ವೇಳೆ ಭಾಷೆ ಇಂಗ್ಲಿಷ್ ಆಗಿದ್ದರೆ ಈ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಕನ್ನಡದಲ್ಲಿ ಚೆಕ್ ಮಾಡಬೇಕಾದರೆ ಈ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು
- ನಂತರ ಹೊಸ ಹಾಗೂ ಆಲಿ ಪಡಿತರ ಚೀಟಿಯ ಮೇಲೆ ಕ್ಲಿಕ್ ಮಾಡಬೇಕು
- ಅದಾದ ಮೇಲೆ ಅಲ್ಲಿ ನಿಮಗೆ ಮೂರು ಆಯ್ಕೆಗಳು ನೋಡಲು ಸಿಗುತ್ತವೆ ಬೆಂಗಳೂರು ಹಾಗೂ ಬೆಂಗಳೂರು ರೂರಲ್ ಸಿಟಿಯಲ್ಲಿರುವಂತಹ ಜನರು ಬೆಂಗಳೂರು ಡಿಸ್ಟ್ರಿಕ್ಟ್ ಮೇಲೆ ಕ್ಲಿಕ್ ಮಾಡಬೇಕು
- ಕೆಳಗೆ ಬಳ್ಳಾರಿ ಬೀದರ್ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ, ಕಲಬುರ್ಗಿ ಕೋಲಾರ ಕೊಪ್ಪಳ ರೈಚೂರ್ ರಾಮನಗರ ಶಿವಮೊಗ್ಗ ತುಮಕೂರ ಯಾದಗಿರಿ ವಿಜಯನಗರ ಡಿಸ್ಟ್ರಿಕ್ಟ್ ಓನ್ಲಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಹೀಗೆ ನೀಡಿರುವ ಎಲ್ಲಾ ಜಿಲ್ಲೆಗಳ ಜನರ ಪಡಿತರ ಚೀಟಿಯ ಸ್ಥಿತಿ ನೋಡಬಹುದು
- ನಂತರ ಕೆಳಗೆ ನಿಮಗೆ ಬಾಗಲಕೋಟೆ ಬೆಳಗಾವಿ ಚಾಮರಾಜನಗರ ಚಿಕ್ಕಮಗಳೂರು ದಕ್ಷಿಣ ಕನ್ನಡ ಧಾರವಾಡ ಗದಗ ಹಾಸನ ಹಾವೇರಿ ಕೊಡಗು, ಮಂಡ್ಯ ಮೈಸೂರು ಉಡುಪಿ ಉತ್ತರ ಕನ್ನಡ ವಿಜಯಪುರ ಜಿಲ್ಲೆಯ ಜನರು ಕೆಳಗೆ ಕ್ಲಿಕ್ ಮಾಡಬೇಕು
- ನಿಮ್ಮದು ಯಾವ ಜಿಲ್ಲೆಯು ಆ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ ಎಂದು ನೋಡಲು ನಿಮಗೆ ಸಿಗುತ್ತದೆ
- ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮಗೆ ಇಂಬರಹ ಸಂಖ್ಯೆ ನಮೂದಿಸಿ ಅಥವಾ ACK ನಂಬರ್ ಭರ್ತಿ ಮಾಡಿ ಎಂದು ಕಾಣುತ್ತದೆ
- ಹೊಸ ಪಡಿತರ ಚೀಟಿಗೆ ನೀವು ಅರ್ಜಿ ಸಲ್ಲಿಸಿದ್ದರೆ ನಿಮಗೆ ಹಿಂಬಾ ಸಂಖ್ಯೆ ಅಥವಾ Ack ನಂಬರ್ ನೀಡಿರುತ್ತಾರೆ ಅದನ್ನು ಅಲ್ಲಿ ನಮೂದಿಸಿ
- ನೀವು ನಿಮ್ಮ ಹೊಸ ಪಡಿತರ ಚೀಟಿಯ ಸ್ಥಿತಿಯನ್ನು ನೋಡಿಕೊಳ್ಳಬಹುದಾಗಿದೆ